ವಾರ್ಷಿಕ ಉತ್ಸವ

ದೇವರ ಉತ್ಸವವು ಮಕರ ಸಂಕ್ರಾಂತಿಯಂದು ಪ್ರತಿ ವರ್ಷ ನೆಡೆಯುತ್ತದೆ. ಸನ್ನಿಧಿಗೆ ಪ್ರೀತಿಯ ಹರಕೆಗಳಾದ ಯಕ್ಷಗಾನ ಬಯಲಾಟ, ರಂಗಪೂಜೆ, ಚರುವಿನ ಪೂಜೆ, ಹೂವಿನ ಪೂಜೆ, ಮಂಗಳಾರತಿ, ಹರಿವಾಣ ನೈವೇದ್ಯ ಮೊದಲಾದ ಪೂಜೆ ದೇವರಿಗೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೇರವೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಶ್ರೀ ದೇವರ ಸನ್ನಿಧಿಯಲ್ಲಿ ಶ್ರೀ ಯಕ್ಷೆ, ಹೈಗುಳಿ, ಚಿಕ್ಕು ದೇವತೆಗಳ ದರ್ಶನವಿದ್ದು ಈ ಮೈ ದರ್ಶನದಲ್ಲಿ ದೇವಸ್ಥಾನದ ಅನುವಂಶಿಕ ಮುಕ್ತೇಸರರ ಉಪಸ್ಥಿತಿಯಲ್ಲಿ ವಾಕ್ ತೀರ್ಮಾನ ಸಿಗುತ್ತದೆ. ಅಲ್ಲದೇ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗದರ್ಶನ ಪಡೆಯುತ್ತಾರೆ.ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯ 2 ವಾರದ ಮುನ್ನ ದೇವರ ವಿಗ್ರಹವನ್ನು ವಿಸರ್ಜನೆ ಮಡಿ ಮಕರ ಸಂಕ್ರಾಂತಿಯಂದು ಪುನರ್ ಪ್ರತಿಷ್ಟೆ ಮಾಡಲಾಗುತ್ತದೆ. ಮಕರ ಸಂಕ್ರಾಂತಿಯಂದು ಮಧ್ಯಾಹ್ನ 12.00 ಘಂಟೆಗೆ ಅಬಿಜನ್ ಮುಹೂರ್ತದಲ್ಲಿ ಮಹಾಮಂಗಳಾರತಿಯೊಂದಿಗೆ ವಾಷರ್ಿಕ ಉತ್ಸವ ಜರುಗುತ್ತದೆ. ಹಾಲಬ್ಬದಲ್ಲಿ ಘಂಟೆ 10.30ಕ್ಕೆ ಕೆಂಡಸೇವೆ ಜರುಗುತ್ತದೆ. ಕೆಂಡಸೇವೆ ಆದ ಕೂಡಲೇ ದೇವರ ಮುಖ ಮಂಟಪದಲ್ಲಿ ದರ್ಶನ ಪಾತ್ರಿಗಳು ಕುಳಿತು ಕೆಂಡ ಕಾಣಿಕೆ ಲೆಕ್ಕ ಮಾಡಿ ದೇವಸ್ಥಾನದ ಅರ್ಚಕರಿಗೂ, ಸೇವಕರಿಗೂ, ಮಾಗಣಿಯವರಿಗೂ, ಪ್ರಸಾದ ಹಂಚುವಾಗ ಬೆಳ್ಳಿ ಕಾಣಿಕೆ ಹಾಕಿ ಕೊಡುವುದು ಮಾಮೂಲು ಪದ್ಧತಿ. ಇದಾದ ಕೂಡಲೇ ದೇವಸ್ಥಾನದ ಮೂಡುಬಾಗಿಲಿನಲ್ಲಿ ಆಡಳಿತದಾರನು ಬ್ರಾಹ್ಮಣರಿಗೆ,ಬ್ರಾಹ್ಮಣೇತರರಿಗೆ ಧರ್ಮ ಮಾಡುವುದು ವಾಡಿಕೆ. ಇದಾದ ನಂತರ ದಶಾವತಾರ ಮೇಳದವರಿಂದ ಸೇವೆ ನೆಡೆಯುತ್ತದೆ. ಜನವರಿ 15ರ ಬೆಳಿಗ್ಗೆ 10.00 ಘಂಟೆಗೆ ಮಂಡಲ ಸೇವೆ ನೆಡೆಯುತ್ತದೆ. ಅಲ್ಲದೇ ಚಿಕ್ಕು ದರ್ಶನದಲ್ಲಿ ಪಡುದಿಕ್ಕಿನಲ್ಲಿ ಕಡಕಟ್ಟುವಿನಲ್ಲಿ ಕುಳಿತು ಮುಕ್ತೇಸರರ ಉಪಸ್ಥಿತಿಯಲ್ಲಿ ಸನ್ನಿಧಾನದಿಂದ ನಂಬಿದ ಗಣಕ್ಕೆ ಪುಷ್ಪ ಕೊಡುವುದು ವಿಶೇಷ. ಅಲ್ಲದೇ ತುಲಾಭಾರ ಸೇವೆ ನೆಡೆಯುತ್ತದೆ. ಜನವರಿ 16ರಂದು ಬೆಳಗ್ಗೆ 10.00ಘಂಟೆಗೆ ಮಂಡಲ ಸೇವೆ ಆದ ನಂತರ ತುಲಾಭಾರ ಸೇವೆ ನೆಡೆಯುತ್ತದೆ. ನಂತರ ಪ್ರಸಾದ ವಿತರಣೆ ರಾತ್ರಿ ಕಡಬಿನ ಪೂಜೆ . ಜಾತ್ರೆಯಾದ ಒಂದು ವಾರದಲ್ಲಿ ಸಂಪ್ರೋಕ್ಷಣೆ. ಅಲ್ಲದೇ ಆಡಳಿತದಾರನ ಮನೆಯಲ್ಲಿ ಮೂರುದೇವರ ದರ್ಶನ ಉಂಟು ಮಾಡಿ ಅಲ್ಲಿ ಹಬ್ಬದಲ್ಲಿ ಕೆಲಸ ಮಾಡಿದ ಸಿಬ್ಬಂದಿಯವರಿಗೆ ಸಂಬಳ ಬಟವಾಡೆ ಮಾಡುವುದು ವಾಡಿಕೆ. ಅಲ್ಲದೇ ಬ್ರಾಹ್ಮಣರಿಗೂ, ಕುಟುಂಬದ ಸದಸ್ಯರಿಗೂ ಕಾಣಿಕೆ ನೀಡುವುದು ಮಾಮೂಲು ಪದ್ಧತಿ.